ಕಾರ್ಟೆಸ್ ಹೆರ್ನಾಂಡೊ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 1485-1547. ಮೆಕ್ಸಿಕೋ ದೇಶದ ವಿಜಯಿ. ಸ್ಪೇನ್ ದೇಶದ ಮೆಡೆಲ್ಲಿನ್ ಎಂಬ ಹಳ್ಳಿಯಲ್ಲಿ ಜನಿಸಿದ. 1511ರಲ್ಲಿ ವೇಲ ಸ್ಕ್ವೆಜóನ ನೇತೃತ್ವದಲ್ಲಿ ನಡೆದ ಕ್ಯೂಬ ದಾಳಿಯಲ್ಲಿ ಪ್ರಸಿದ್ಧಿಗೆ ಬಂದ. ವೇಲಸ್ಕ್ವೆಜ್óನ ಆದೇಶದಂತೆ 1519 ರಲ್ಲಿ ಮೆಕ್ಸಿಕೋ ವಿಜಯಕ್ಕಾಗಿ ನೌಕೆಯಲ್ಲಿ ಹೊರಟ. ಇವನ ಪ್ರಾಬಲ್ಯದಿಂದ ಭೀತನಾದ ವೇಲಸ್ಕ್ವೆಜ್ ಮೆಕ್ಸಿಕೋ ವಿಜಯದ ಸನ್ನದನ್ನು ರದ್ದು ಪಡಿಸಿದ. ಆದರೂ ಆ ಆಜ್ಞೆಯನ್ನು ಉಪೇಕ್ಷಿಸಿ, ಕಾರ್ಟೆಸ್ ಯುಕಟಾನ್ ಪ್ರದೇಶವನ್ನು ತಲಪಿ ಅಲ್ಲಿನ ನಿವಾಸಿಗಳೊಂದಿಗೆ ಸ್ನೇಹ ಗಳಿಸಿದ. ಅನಂತರ ಟಬಾಸ್ಕೊನಗರವನ್ನು ವಶಪಡಿಸಿಕೊಂಡ. ಅಲ್ಲಿಯ ನಿವಾಸಿಗಳು ಇವನಿಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಅರ್ಪಿಸಿದರು. ತರುವಾಯ ಆeóÉ್ಟಕರನ್ನು ಸಂಧಿಸಿದಾಗ ಅವರ ದೊರೆಯಾದ ಮಾಂಟೆಜೂóಮನಿಂದ ಇವನಿಗೆ ಕಾಣಿಕೆಗಳು ಬಂದುವು. ವೀರಾಕ್ರೂಝ್ ಪ್ರದೇಶದಲ್ಲಿ ಒಂದು ನಗರವನ್ನು ಸ್ಥಾಪಿಸಿ ಅದಕ್ಕೆ ಸ್ವಯಮಾಡಳಿತದ ಹಕ್ಕನ್ನು ನೀಡಿದ (1519). ಅನಂತರ ಮೆಕ್ಸಿಕೋ ನಗರದತ್ತ ಧಾವಿಸಿದ. ಮಾರ್ಗದಲ್ಲಿ ಟ್ಲಾಕ್ಸ್‍ಕಲದ ನಿವಾಸಿಗಳು ಮೊದಲಿಗೆ ಇವರೊಂದಿಗೆ ಹೋರಾಡಿದರೂ ಅನಂತರ ಮಾಂಟೆಜೂಮನ ದಬ್ಬಾಳಿಕೆಯನ್ನೆದುರಿಸಲು ಇವನನ್ನು ಕೂಡಿಕೊಂಡರು. ಈ ಮಧ್ಯೆ ಮಾಂಟೆಜೂóಮನ ಪಿತೂರಿಯ ವಿಷಯ ತಿಳಿದು ಬಂದುದರಿಂದ ಅವನ ಸೈನ್ಯವನ್ನು ಹತಮಾಡಿ ಅವನ ರಾಜಧಾನಿ ಟಿನೊಚ್‍ಟಿಟ್ಲಾನ್ ಮೇಲೆ ನುಗ್ಗಿದ. ಸರೋವರದ ನಡುವೆ ಇದ್ದ ಮರದ ಮೂರು ಸೇತುವೆಗಳ ಮೂಲಕ ಪ್ರವೇಶಿಸಬೇಕಾಗಿದ್ದ ಆ ಸುಂದರ ನಗರದ ಮಹಾದ್ವಾರದಲ್ಲಿ, ತಮ್ಮ ಅಧಿದೇವತೆ ಕ್ವೆಟ್ಜಲ್‍ಕೊಟ್‍ಲ್‍ನೇ ಬಂದಿರುವನೆಂದು ಭೀತರಾದ ಮಾಂಟೆಜೂóವ ಮತ್ತು ಅವನ ಪರಿವಾರದವರು ಕಾರ್ಟೆಸನನ್ನು ಭೀತಿಗೌರವಗಳೊಡನೆ ಸ್ವಾಗತಿಸಿದರು. ಮಾಂಟೊಜೂವನನ್ನು ತನ್ನ ಶಿಬಿರದಲ್ಲಿ ವಾಸಿಸುವಂತೆ ನಿರ್ಬಂಧಿಸಿ, ಈತ ಆ ರಾಜ್ಯವನು ತನ್ನ ಹತೋಟಿಯಲ್ಲಿರಿಸಿಕೊಂಡ. ಆ ವೇಳೆಗೆ ವೇಲಸ್ಕ್ವೆಜ್ó ನಿಂದ ಕಳಿಸಲಾದ ಪನ್ ಫಿಲೊ ಡಿ ನರ್ವೆಇeóïನ ನಾಯಕತ್ವದಲ್ಲಿ ಸ್ಪ್ಯಾನಿಷ್ ಸೈನ್ಯ ತನ್ನ ವಿರುದ್ಧ ಬಂದ ಸಂಗತಿ ತಿಳಿದು ಬಂದುದರಿಂದ, ಕಾರ್ಟೆಸ್ ಅದನ್ನೆದುರಿಸಬೇಕಾಯಿತು. ಆ ಕದನದಲ್ಲಿ ಮಾಂಟೆಜೂಮ ಸತ್ತರೂ ಕಾರ್ಟೆಸ್ ಗೆದ್ದು ತನ್ನ ಅಧಿಕಾರವನ್ನು ಸ್ಥಿರಗೊಳಿಸಿಕೊಂಡ, ಅನಂತರ ಸ್ಪೇನ್ ಚಕ್ರವರ್ತಿಯ ಕೃಪೆ ಲಭ್ಯವಾಯಿತು. ಮೆಕ್ಸಿಕೋದಲ್ಲಿ ಈತ ಸ್ಪೇನಿನ ಮಹಾದಂಡನಾಯಕನಾದ. ಕ್ಯಾಲಿಫೋರ್ನಿಯದ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡು ಅನಂತರ ಸ್ವೇನಿಗೆ ಹಿಂತಿರುಗಿದ. ಇವನ ಶತ್ರುಗಳ ಪ್ರಭಾವದಿಂದ ಚಕ್ರವರ್ತಿಯ ಕೃಪೆ ಕಳೆದುಕೊಂಡು ತನ್ನ ಜಮೀನ್ದಾರಿಗೆ ಈತ ಮರಳಬೇಕಾಯಿತು. ಕಾರ್ಟೆಸ್ ಮೃತನಾದ್ದು 1547 ರ ಡಿಸೆಂಬರ್ 2 ರಂದು.

 ಕಾರ್ಟೆಸ್ ಮೆಕ್ಸಿಕೋದಲ್ಲಿ (ಹೊಸ ಸ್ಪೇನ್) ಕೈಕೊಂಡ ಕಾರ್ಯಗಳಿಂದ ಇವನಿಗೆ ಪ್ರಸಿದ್ಧಿ ದೊರಕಿತು. ದೇಶದ ಭೂಮಿಯನ್ನು ಜನರಲ್ಲಿ ಹಂಚಿದ್ದಲ್ಲದೆ ಗಣಿ ಅಭಿವೃದ್ಧಿಗೆ ಮತ್ತು ವ್ಯವಸಾಯಕ್ಕೆ ಕಾರ್ಟೆಸ್ ಹೆಚ್ಚಿನ ಪ್ರೋತ್ಸಾಹ ನೀಡಿದ. ವಸಾಹತು ಸ್ಥಾಪನೆಯಲ್ಲಿ ಆಸಕ್ತಿ ವಹಿಸಿದ. ಸೈನ್ಯ ಪಡೆಗಳನ್ನು ಕಳಿಸಿ ಗ್ವಾಟೆಮಾಲ ಮತ್ತು ಹಾಂಡುರಸ್ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡ. 

 

(ಬಿ.ಎಸ್.ಪಿ.)